Template:Appeal/Adrianne/kn: Difference between revisions

From Donate
Jump to navigation Jump to search
Content deleted Content added
Seddon (WMF) (talk | contribs)
Created page with "{{Template:2011FR/quote |ಒಬ್ಬ ಪುಟ್ಟ ಮಗುವಾಗಿ ನನಗೊಂದು ದುಬಾರಿ ಹವ್ಯಾಸವಿದೆ. ಪುಸ್ತಕಗಳ..."
(No difference)

Revision as of 16:14, 9 November 2012

ಒಬ್ಬ ಪುಟ್ಟ ಮಗುವಾಗಿ ನನಗೊಂದು ದುಬಾರಿ ಹವ್ಯಾಸವಿದೆ. ಪುಸ್ತಕಗಳು.ನನ್ನ ಪಾಲಕರು ತಂದುಕೊಡುವ ಯಾವುದೇ ಪುಸ್ತಕವನ್ನು ಓದುತ್ತೇನೆ -- ಮತ್ತು ಇನ್ನೊಂದಕ್ಕೆ ಬೇಡುತ್ತೇನೆ. ಆದ್ದರಿಂದ ಅವರು ತಮ್ಮ ಬ್ಯಾಂಕ್‌ನಲ್ಲಿ ಹಣವನ್ನು ಉಳಿಸಲು ಆಲೋಚಿಸಿದರು. ನನಗೆ ಜೇನ್ ಐರ್ ಪುಸ್ತಕವನ್ನು ಕೊಂಡುತಂದರು.

Adrianne Wadewitz

ಆ ದೊಡ್ಡ ಕಾದಂಬರಿಯನ್ನು ಮುಗಿಸಲು ನನಗೆ ಬಹಳ ಸಮಯ ಹಿಡಿಯಿತು, ಆದರೆ ನಾನು ಪ್ರೀತಿಯಲ್ಲಿ ಬಿದ್ದೆ. ಐದನೇ ವರ್ಗದಲ್ಲಿ ನಮಗಿಷ್ಟ ಬಂದ ವಿಷಯಗಳನ್ನು ನಮ್ಮ ಸಹಪಾಠಿಗಳಿಗೆ ಕಲಿಸಲು ಹೇಳುತ್ತಿದ್ದರು. ನಾನು ಹತ್ತೊಂಭತ್ತನೆಯ ಶತಮಾನದ ಸಾಹಿತ್ಯದ ಬಗ್ಗ್ಗೆ ಉಪನ್ಯಾಸ ನೀಡಿದೆ.

ಇಂದು, ನೀವು ಊಹಿಸಿರಬಹುದಾದಂತೆ, ನಾನೊಬ್ಬ ಇಂಗ್ಲಿಷ್ ಅಧ್ಯಾಪಕ. ನಾನೂ ಕೂಡ ವಿಕಿಪೀಡಿಯಕ್ಕೆ ಕೊಡುಗೆ ನೀಡುತ್ತೇನೆ, ಮೇರಿ ಶೆಲ್ಲಿ, ಫ್ರಾಂಕೆನ್ಸ್ಟೀನ್‌ನ ಲೇಖಕ ಮತ್ತು ಪ್ರೈಡ್ ಅಂಡ್ ಪ್ರೆಜ್ಯುಡೀಸ್ ಬರೆದ ಜೇನ್ ಆಸ್ಟಿನ್ ಇತ್ಯಾದಿ ಲೇಖಕರ ಬಗ್ಗೆ ಲೇಖನಗಳನ್ನು ಸಂಪಾದಿಸುತ್ತೇನೆ.

ನಾನು ವಿಕಿಪೀಡಿಯದಲ್ಲಿನ ನನ್ನ ಕೆಲಸದ ಬಗ್ಗೆ ಯೋಚಿಸುವಾಗ, ನನ್ನನ್ನು ನಾನು ವಿಷಯವನ್ನು ಸೇರಿಸುವ ಮತ್ತೊಬ್ಬರಂತೆ ಎಂದು ತಿಳಿಯದೆ; ನಾನೊಬ್ಬ ಬೋಧಕನೆಂದು ತಿಳಿಯುತ್ತೇನೆ. ವಿಕಿಪೀಡಿಯದ ಮುಖಾಂತರ, ನನ್ನ ಹರಿವು ನನ್ನ ತರಗತಿಯ ಹೊರಗೂ ವ್ಯಾಪಿಸಿದೆ. ಕಳೆದ ಒಂದು ತಿಂಗಳಲ್ಲೇ, ವಿಕಿಪೀಡಿಯದ ಜೇನ್ ಆಸ್ಟಿನ್ ಪುಟ ೧೧೫,೦೦೦ ಬಾರಿ ವೀಕ್ಷಿಸಲ್ಪಟ್ಟಿದೆ.

ನನ್ನ ವಿಶ್ವವಿದ್ಯಾಲಯದಲ್ಲಿ, ಅನೇಕ ಉತ್ಕೃಷ್ಟ ವಿಷಯಾಧಾರಗಳ ಲಭ್ಯತೆ ನನಗೆ ಇದೆ. ಆದರೆ ಬಹಳಷ್ಟು ಮಂದಿಗೆ ಇದರ ಲಭ್ಯತೆ ಇರುವುದಿಲ್ಲ; ಇವು ಹಣದ ಗೋಡೆಯ ಹಿಂದೆ ಮರೆಯಾಗಿ ಕುಳಿತಿವೆ. ವಿಕಿಪೀಡಿಯ ಸಂಪಾದನೆಯಲ್ಲಿ ತೊಡಗಿ, ನಾನು ಈ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿದೆ.

ನಾನು ಕಲಿಕೆಯನ್ನು ಪ್ರೀತಿಸುತ್ತೇನೆ. ಯಾವಾಗಲೂ ಪ್ರೀತಿಸುತ್ತಲೇ ಬಂದಿದ್ದೇನೆ. ಆದ್ದರಿಂದಲೇ ಇದು ಎಲ್ಲರಿಗೂ ಲಭ್ಯವಾಗಬೇಕು ಎಂದು ನಾನು ಬಲವಾಗಿ ನಂಬಿದ್ದೇನೆ.

ನೀವು ಒಪ್ಪುತ್ತೀರಾ? ಹಾಗಿದ್ದಲ್ಲಿ ವಿಕಿಪೀಡಿಯ ಬೆಂಬಲಿಸಲು ನನ್ನ ಜೊತೆಗೂಡಿ.